Download

ವಿಶಿಷ್ಟ ಕಲ್ಲಿ Unique Stone



ವಿಶಿಷ್ಟ ಕಲ್ಲು 

ವಿಶಿಷ್ಟ ಕಲ್ಲಿರುವುದು ಸಕಲೇಶಪುರ ತಾಲ್ಲೂಕಿನ ಬಿಸಿಲೆ ಘಾಟಿಯ ಸಮೀಪ. ಬ್ರಿಟಿಷರಿಂದ ಸ್ಥಾಪಿತವಾದ ಕಲ್ಲಿನ ವೈಶಿಷ್ಟ್ಯತೆ ಎಂದರೆ ಕಲ್ಲಿನ ಎಡಭಾಗಕ್ಕೆ ಬೀಳುವ ಮಳೆಯ ನೀರು ಪಶ್ಚಿಮಾಭಿಮುಖವಾಗಿ ಹರಿದು ಅರಬ್ಬಿ ಸಮುದ್ರವನ್ನೂ ಹಾಗೂ ಬಲಭಾಗಕ್ಕೆ ಬೀಳುವ ಮಳೆ ಪೂರ್ವಾಭಿಮುಖವಾಗಿ ಹರಿದು ಬಂಗಾಳಕೊಲ್ಲಿಯನ್ನೂ ಸೇರುವುದು. ಈಸ್ಟ್ ಇಂಡಿಯಾ ಕಂಪೆನಿಯ ಸರ್ವೇ ಅಧಿಕಾರಿಗಳು ಪಶ್ಚಿಮಘಟ್ಟವನ್ನು ಸಮೀಕ್ಷೆ ಮಾಡುವಾಗ ಸ್ಥಳವನ್ನು ಗುರುತಿಸಿ ಕಲ್ಲನ್ನು ನೆಟ್ಟ ಕುರಿತು ದಾಖಲೆಯಿದೆ.

 

ಇದೇ ರೀತಿಯ ಮಾಹಿತಿಯನ್ನು ಚಿಕ್ಕಮಗಳೂರು ಜಿಲ್ಲೆಗೆ ನೂರು ವರ್ಷಗಳು ತುಂಬಿದ ನೆನಪಿಗೆ ಜಿಲ್ಲಾಡಳಿತ ಸ್ಮರಣ ಸಂಚಿಕೆಯೊಂದನ್ನು ಬಿಡುಗಡೆ ಮಾಡಿದ್ದಾಗ ಪುಸ್ತಕಕ್ಕೆ ತೇಜಸ್ವಿಯವರು ಬರೆದಿದ್ದ ಲೇಖನದಲ್ಲಿ " ಮೂಡಿಗೆರೆ ಬಸ್ ನಿಲ್ದಾಣದ ಎಡ ಭಾಗಕ್ಕೆ ಬೀಳುವ ಮಳೆ ಭದ್ರಾನದಿಗೂ ಬಲಭಾಗಕ್ಕೆ ಬೀಳುವ ಮಳೆ ಹೇಮಾವತಿಯ ಮೂಲಕ ಬಂಗಾಳಕೊಲ್ಲಿಗೂ ಸೇರುತ್ತದೆ" ಎಂದು ಉಲ್ಲೇಖಿಸಿದ್ದಾರೆ


Comments

Popular Posts