Download

General Knowledge


 "ರಾಮದೇವರ" ಬೆಟ್ಟದಲ್ಲಿ ರಣಹದ್ದುಗಳ 'ಸಂತಾನೋತ್ಪತ್ತಿ ಕೇಂದ್ರ' "ಬನ್ನೇರುಘಟ್ಟಕ್ಕೆ" ಸ್ಥಳಾಂತರಗೊಳ್ಳಲಿದೆ. ಬೆಟ್ಟವು ಹದ್ದಿನ "ಮರಿಗಳ ಬಿಡುಗಡೆ" ತಾಣವಾಗಿ ಉಳಿಯಲಿದೆ.
==============
ಪ್ರಸ್ತುತ ದೇಶದಲ್ಲಿ ವೈಟ್ ಬ್ಯಾಕ್ಡ್ ಹದ್ದು 6 ಸಾವಿರ, ಉದ್ದ ಕೊಕ್ಕಿನ ರಣಹದ್ದು 12 ಸಾವಿರ ಮತ್ತು ಸ್ಲೆಂಡೆಡ್ ಬಿಲ್ಲಡ್ ವಲ್ಚರ್ ಕೇವಲ ಒಂದು ಸಾವಿರ ಇವೆ ಎಂದು ಅಂದಾಜಿಸಲಾಗಿದೆ
=====================
🌿 ಬನ್ನೇರುಘಟ್ಟವೇ ಏಕೆ?
==============
ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಈ ಕೇಂದ್ರ ಸ್ಥಾಪನೆ ಮಾಡುವುದರಿಂದ ವೈದ್ಯರು ಮತ್ತು ಸಿಬ್ಬಂದಿ ಲಭ್ಯತೆ ಸದಾಕಾಲ ದೊರೆಯುತ್ತದೆ. ಹೆಚ್ಚಿನ ಸೌಕರ್ಯದ ಅಗತ್ಯವೂ ಇರುವುದಿಲ್ಲ ಎನ್ನುವ ಕಾರಣಕ್ಕೆ ಅರಣ್ಯ ಇಲಾಖೆ ಈ ನಿರ್ಧಾರಕ್ಕೆ ಬಂದಿದೆ. ಆದರೆ ಹದ್ದುಗಳ ಆರೋಗ್ಯದ ದೃಷ್ಟಿಯಿಂದ ಕನಿಷ್ಠ 5 ಕಿ.ಮೀ. ಅಂತರದಲ್ಲಿ ಈ ಕೇಂದ್ರ ತೆರೆಯಬೇಕು. ಇಲ್ಲವಾದಲ್ಲಿ ಉಳಿದ ಪ್ರಾಣಿ-ಪಕ್ಷಿಗಳ ಸೋಂಕು ಸುಲಭವಾಗಿ ರಣಹದ್ದುಗಳಿಗೆ ತಗುಲಬಹುದು ಎನ್ನುವ ಆತಂಕವನ್ನು ತಜ್ಞರು
ವ್ಯಕ್ತಪಡಿಸುತ್ತಾರೆ.

Comments

Popular Posts